ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬಡಾಬಡಗು ಬಿಡಲಿ, ಸಭಾಹಿತ ತಿಟ್ಟು ಇರಲಿ : ಹೊಸ್ತೋಟ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜನವರಿ 18 , 2015
ಜನವರಿ 18, 2015

ಬಡಾಬಡಗು ಬಿಡಲಿ, ಸಭಾಹಿತ ತಿಟ್ಟು ಇರಲಿ : ಹೊಸ್ತೋಟ

ಶಿರಸಿ : ಯಕ್ಷಗಾನ ಕ್ಷೇತ್ರದ ಐತಿಹಾಸಿಕ ಸಂಗತಿಗಳನ್ನು ಪರಿಗಣಿಸಿದರೆ ಉತ್ತರ ಕನ್ನಡದ ಕಲಾಶೆಲಿಯನ್ನು ಬಡಾಬಡಗು ತಿಟ್ಟು ಎನ್ನುವದಕ್ಕಿಂತ ಸಭಾಹಿತ ತಿಟ್ಟು ಎಂದು ಉಲ್ಲೇಖಿಸುವದು ಹೆಚ್ಚು ಸೂಕ್ತವಾಗುತ್ತದೆ ಎಂದು ಯಕ್ಷ ತಪಸ್ವಿ ಎಂದೇ ಹೆಸರಾದ ಹಿರಿಯ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ ಪ್ರತಿಪಾದಿಸಿದರು.

ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರಣೆ ನೀಡಿದರು. ಯಕ್ಷಗಾನದ ಪಡುವಲಪಾಯದಲ್ಲಿ ಪ್ರಸ್ತುತ ತೆಂಕು, ಬಡಗು, ಬಡಾಬಡಗು ತಿಟ್ಟು ಎಂದು ವಿಭಾಗಿಸಿದ್ದು ಅದನ್ನು ತೆಂಕು, ಬಡಗು ಮತ್ತು ಸಭಾಹಿತ ತಿಟ್ಟು ಎನ್ನುವದಾಗಿ ಪರಿಗಣಿಸಬೇಕು ಎನ್ನುವ ಆಗ್ರಹ ವ್ಯಕ್ತಪಡಿಸಿದರು.

ಅರ್ಧಶತಮಾನದ ಹಿಂದೆ ಬಳಸುತ್ತಿದ್ದ ಸಭಾಹಿತ ಎನ್ನುವದು ಯಾವುದೇ ಮನೆತನಕ್ಕೆ ಮೀಸಲಾದ ಶಬ್ದ ಅಲ್ಲ, ಬದಲಿಗೆ ಸಭೆಗೆ ಹಿತ ಎಂಬರ್ಥದಲ್ಲಿ ಸಭಾಹಿತ ಎಂದಾಗಿದೆ. ಆದ್ದರಿಂದ ಸಭಾಹಿತ ತಿಟ್ಟು ಎನ್ನುವದೇ ಹೆಚ್ಚು ಔಚಿತ್ಯಪೂರ್ಣವಾಗುತ್ತದೆ ಎಂದು ಹೊಸ್ತೋಟ ಭಾಗವತರು ವಿವರಿಸಿದರು.

ಐತಿಹಾಸಿಕ ಹಿನ್ನೆಲೆ ಈ ಕುರಿತು ಐತಿಹಾಸಿಕ ಮಾಹಿತಿಗಳನ್ನು ಅವರು ಪ್ರಸ್ತಾಪಿಸಿದರು. 16ನೇ ಶತಮಾನದ ಉತ್ತರಾರ್ಧದಲ್ಲಿ ಕೆಳದಿ ಚನ್ನಮ್ಮಾಜಿ ರಾಣಿ ದತ್ತುಪುತ್ರನನ್ನಾಗಿ ಬಸವನಾಯಕನನ್ನು ಸ್ವೀಕರಿಸಿ ಇಂದಿನ ಹಳದಿಪುರದಲ್ಲಿ ಅಗ್ರಹಾರ ಕಟ್ಟಿಸಿದಳು. ಮೇಲುಸ್ತುವಾರಿಗೆ ಸಭಾಹಿತ ಹುದ್ದೆಯನ್ನು ಸ್ಥಾಪಿಸಿದ್ದಳು. ಹೀಗೆ ಸಭಾಹಿತ ಹುದ್ದೆಯಲ್ಲಿ ವ್ಯವಹರಿಸಿದವರ ಪೀಳಿಗೆ ಸಭಾಹಿತ ಎಂದಾಗಿದೆ. ಈ ಹುದ್ದೆಗೆ ಏರಿದ್ದ ವಿಷ್ಣು ಸಭಾಹಿತ ಎಂಬಾತ ಯಕ್ಷಗಾನ ಕವಿಯಾಗಿ ಶತಾಸ್ಯರಾವಣ ಕಾಳಗ, ಚಂದ್ರಹಾಸ ಚರಿತ್ರೆ, ಬಬ್ರುವಾಹನ ಕಾಳಗ ಮುಂತಾದ ಪ್ರಸಂಗಗಳನ್ನು ರಚಿಸಿದ್ದಾನೆ ಎಂದು ಅವರು ಉಲ್ಲೇಖಿಸಿದರು.

ಇಂಥ ಸಭಾಹಿತರ ಉಸ್ತುವಾರಿಯಲ್ಲಿ ಆ ಕಾಲದಲ್ಲಿ ಯಕ್ಷಗಾನದ ಕುರಿತು ಅತೀವ ಆಸಕಿ,್ತ ಕಾಳಜಿಗಳು ಇದ್ದವು. ಯಕ್ಷಗಾನದ ತಾಳೆಗರಿಗಳ ಸಂಗ್ರಹ ಪುರಾಗ್ರಹಾರದಲ್ಲಿ ಇದ್ದವು. ಉತ್ತರ ಕನ್ನಡದ ಯಕ್ಷಗಾನ ಪ್ರಿಯರು ಆಗ ಯಕ್ಷ ಆಖ್ಯಾನದ ಅಧ್ಯಯನಕ್ಕೆ ಸಗ್ರಹಾರದ ನೆರವು ಪಡೆದಿದ್ದರು. ಅಗ್ರಹಾರದ ಮುಖ್ಯಸ್ಥ ಸಭಾಹಿತರು ಆಖ್ಯಾನದ ನಕಲು ಪ್ರತಿಗಳನ್ನು ನೀಡುತ್ತಿದ್ದು ಸಭಾಹಿತ ಪ್ರತಿಗಳು ಎಂದೇ ಕರೆಯಲ್ಪಡುತ್ತಿದ್ದವು. ಅಂತೆಯೇ ಕಳೆದ ಅರ್ಧಶತಮಾನದ ಹಿಂದಿನವರೆಗೂ ಉತ್ತರಕನ್ನಡದ ಯಕ್ಷಗಾನ ಸಭಾಹಿತ ಮಟ್ಟು ಎಂದೇ ಇತ್ತು. ಈಗ ಬಡಾಬಡಗು ತಿಟ್ಟು ಎಂದಾಗಿದ್ದು ಅದನ್ನು ಇನ್ನು ಮುಂದೆ ಸಭಾಹಿತ ಮಟ್ಟು ಎಂದೇ ಪರಿಗಣಿಸಬೇಕು ಎಂದು ಆಶಿಸಿದರು. ಯಕ್ಷಗಾನ ಅರ್ಥಧಾರಿ ಸುಬ್ರಾಯ ಕೆರೆಕೊಪ್ಪ ಉಪಸ್ಥಿತರಿದ್ದರು.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ